ಮೊನ್ನೆ ಸ್ಯಾನ್ ಹೋಸೆ ಲೈಬ್ರರಿಯಿಂದ ಪುಸ್ತಕದ ಹೊರೆ ಹೊತ್ತು ಹೊರ ಬಂದೆ ಇನ್ನೇನು ಲಿಫ್ಟ್ ಬಾಗಿಲು ಹಾಕಿಕೊಳ್ಳುತ್ತೆ ಅಷ್ಟರಲ್ಲಿ ಓಡಿ ಒಳಗೆ ನುಗ್ಗಿ ಬಿಡೋಣವೆಂದು ಓಡುತ್ತಿರುವಾಗ ಸೆಕ್ಯೂರಿಟಿಯ ವೇಷ ತೊಟ್ಟಿದ್ದ ಹೆಂಗಸೊಬ್ಬಳು ದೂರದಿಂದ
ಅವಸರವರವಾಗಿ ನನ್ನೆಡೇಗೆ ಬರುತ್ತಾ ನಿಲ್ಲೆಂದು ಕೈತೋರಿಸಿದಳು ನಾನೇನು ತಪ್ಪು ಮಾಡಿದೆನಪ್ಪಾ ಅಂತ ಗಾಭರಿಯಿಂದ
ನಿಂತೆ.ಆ ದಢೂತಿ ನನ್ನೆಡೆಗೆ ಬಂದು ಇಂಡಿಯನ್..?ಅಂತ ಕೇಳಿದಳು ಹೌದೆಂದು ಗೋಣು ಅಲ್ಲಾಡಿಸಿದೆ ಇವಳು ಮೆಕ್ಸಿಕನ್ನಾ ಅಥ್ವಾ ಇಂಡಿಯನ್ನೇ ಇರಬಹುದಾ..?ಮನದಲ್ಲೇ ಯೋಚಿಸುತ್ತಾ.
ಹಿಂದಿ ಬೋಲ್ತೇಹೋ..?ಕೇಳಿದಳು
'ತೋಡಾ ಸಾ..' ಅಂದೆ
ತುಮಾರಾ ಬಾಲ್ ಬಹುತ್ ಅಛ್ಛಾ ಹೇ..ಅಸ್ಲೀ ಹೇ..?
ನಾನು ಉಸ್ಸೆಂದು ಉಸಿರು ಬಿಟ್ಟೆ!
ತಲೆ ಮೇಲೆ ಕೆಳಗೆ ಆಡಿಸಿದೆ
ಇಸೆ ಕಾಟ್ ನಾ ಮತ್...'ಅಂತ ಹೇಳುತ್ತಾ ಸ್ನೇಹದ ನಗೆಬೀರಿ ಅವಳು ಅಲ್ಲಿಂದ ನಿರ್ಗಮಿಸಿದಳು
******************
ಇವತ್ತು ತಲೆ ಬಾಚಿಕೊಳ್ಳುತ್ತಾ ಆಹಾ ನನ್ನ ಸ್ಟೂಡೆಂಟ್ ಡೇಸ್ ನಲ್ಲಿ ನನ್ನ ಹೇರ್ ಕೇರ್ ಸಾಹಸಗಳು... ನೆನಪಿಗೆ ಬಂದವು
ಅವನ್ನೆಲ್ಲ ನಿಮ್ಮೊಂದಿಗೆ ಯಾಕೆ ಹಂಚಿಕೊಳ್ಳಬಾರದು ಅನ್ನಿಸಿತು
ಹೀಗೆ ಹುಟ್ಟಿದ್ದೇ ಈ "ಮೊಗ್ಗಿನ ಜಡೆ"
Subscribe to:
Post Comments (Atom)
1 comment:
ಆಹಾ, ಮೊಗ್ಗಿನ ಜಡೆ!
ಹೆಸರು ಚೆನ್ನಾಗಿದೆ, ಜೊತೆಗೆ ಕಾನ್ಸೆಪ್ಟೂ...!
ನಮ್ಮ ಮೋಟು ಜಡೆಗಳಿಗೂ ಇಲ್ಲಿ ಜಾಗ ಇದ್ಯಾ?
ನಿನ್ನ ನೀಳವೇಣಿಯ ಚಿತ್ರವೇ ಹಾಕಿ ಶುರುಮಾಡಬೇಕಿತ್ತು!!
Post a Comment