ತಲೆ ಹೊಟ್ಟಿನ ನಿವಾರಣೆಗೆ ಕೆಲವು ಉಪಾಯಗಳು ಹೀಗೆ...
1.ಹೆಸರು ಕಾಳಿನ ಹಿಟ್ಟನ್ನು ಮೊಸರಿನಲ್ಲಿ ಕಲೆಸಿ ಪೇಸ್ಟ್ ಮಾಡಿ ತಲೆ ಬುರುಡೆಗೆ ಹಚ್ಚುವುದು
2.ನೆಲ್ಲಿಕಾಯಿ ರಸ, ನಿಂಬೆರಸ ಕೊಬ್ಬರಿ ಎಣ್ಣೆಯಲ್ಲಿ ಬೆರೆಸಿ ಹಚ್ಚುವುದು
3.ಮೆಂತ್ಯ ಕಾಳನ್ನು ಏಳೆಂಟು ಗಂಟೆ ನೀರಲ್ಲಿ ನೆನೆಸಿ ರುಬ್ಬಿ ತಲೆಗೆ ಹಚ್ಚುವುದು
4.ಈರುಳ್ಳಿ ರಸ/ಪೇಸ್ಟ್ ತಲೆ ಬುರುಡೆಗೆ ಹಚ್ಚುವುದು
5.ಹುಳಿಮೊಸರು ನಿಂಬೆ ರಸ ಬೆರೆಸಿ ಹಚ್ಚುವುದು
ವಿಶೇಷ ಸೂಚನೆ-ಮೇಲಿನ ವಿಧಿಗಳಲ್ಲೊಂದನ್ನು ಅನುಸರಿಸಿದ ಮೇಲೆ ಚೆನ್ನಾಗಿ ತಲೆ ತೊಳೆದು ಕೊಳ್ಳುವುದು ನಿಮಗೂ ನಿಮ್ಮ ಮನೆಯಲ್ಲಿ ಇರುವ ಇತರರಿಗೂ ಕ್ಷೇಮ
Monday, May 12, 2008
Subscribe to:
Post Comments (Atom)
3 comments:
ಹೀಗೆ ಜನರಲ್ಲಾಗಿ ಹೇಳಿದ್ರೆ ಕನ್ಫ್ಯೂಷನ್ನು ಮೇಡಂ!!
ಎಣ್ಣೆಣ್ಣೆ ಬುರುಡೆಗೊಂದು ಪಥ್ಯ-
ಒಣಕಲು ಕರಟಕ್ಕೊಂದು ಲೇಪ-
ಮೋಟು ಬಾಲಕ್ಕೊಂದು ರೀತಿ-
ಮಾರುದ್ದ ಜಡೆಗೊಂದು ನೀತಿ-
ಹೀಗೆಲ್ಲ ಕೆಟಗರೈಸ್ ಮಾಡೋದಲ್ವೆ!?
ಜನರಲ್ಲಾಗಿ ಎರಡು ಪ್ರಶ್ನೆ-
(೧) ಈ ವಿಧಿಗಳಲ್ಲೊಂದನ್ನು ಅನುಸರಿಸಿದ ನಂತರ, ಎಷ್ಟು ಹೊತ್ತಿನ ಮೇಲೆ ತಲೆ ತೊಳೀಬೇಕು?
(೨) ತತ್ತಿಯ ಬಿಳಿಲೋಳೆ ಹಚ್ಚಿದರೂ ಹೊಟ್ಟು ನಿವಾರಣೆ ಆಗುತ್ತಂತೆ, ಕೂದಲು ಉದ್ದ ಬರುತ್ತಂತೆ, ಹೌದಾ...?
See This:
http://healthsp1939.blogspot.com/2008/04/blog-post_23.html
ಮಾಲಾ...
"ತಲೆಹೊಟ್ಟೇ" ಟೈಟಲ್ ಓದಿದವಳು ಯೋಚಿಸುತ್ತಿದ್ದೆ...
ಅರೇ...‘ತಲೆಹೊಟ್ಟೆ’ ಇದಾವ ಅಂಗವಪ್ಪಾ ಅಂತ :)
ಆಮೇಲೆ ಹೊಳೆಯಿತು. ನಕ್ಕೆ ಅಂತ ಬೇರೆ ಹೇಳಬೇಕಿಲ್ಲ ತಾನೇ? ನನ್ನ ಪೆದ್ದುತನಕ್ಕೆ ನಾನೇ :)
Post a Comment