Tuesday, May 20, 2008

ಎಲ್ಲೆಲ್ಲಿ ನೋಡಲೀ...

ಜನಪ್ರಿಯ ಸಿನಿಮಾ ಯುಗಳ ಗೀತೆಯೊಂದನ್ನು ಹೇನು ದಂಪತಿಗಳು ಹಾಡುತ್ತಿದ್ದದ್ದು ಹೀಗೆ...
(ಇವುಗಳಲ್ಲಿ ಕೆಲವು ಸಾಲುಗಳು ದಂಪತಿಗಳು ಒಬ್ಬರಿಗೊಬ್ಬರು ಪ್ರೇಮದಿಂದ ಹಾಡಿಕೊಳ್ಳುತ್ತಿದ್ದುದು ಒಂದೆರಡು ಸಾಲುಗಳನ್ನು
ಸದರಿ ತಲೆಯ ಒಡೆಯ/ಒಡತಿಯ ಮೇಲಿನ ಪ್ರೀತಿಯಿಂದ ಹಾಡಿದ್ದು ಅವು ಯಾವ್ಯಾವ ಸಾಲುಗಳೆಂದು "ಅನುಭವಸ್ಥ"ರಾದ ನಿಮಗೆ ನಾನು ಬಿಡಿಸಿ ಹೇಳಬೇಕಾದ್ದಿಲ್ಲ ಎಂದು ನಂಬಲೇ...?)


ಎಲ್ಲೆಲ್ಲಿ ನೋಡಲೀ ಹೇನ್ ಮರಿಯ ಕಾಣುವೇ
ಕೂದ್ಲಲ್ಲಿ ತುಂಬಿರುವೆ ಜಡೆಯಲಿ/ಕ್ರಾಪಲಿ ಮನೆ ಮಾಡಿ ಆಡುವೆ

ಆ ಗುಂಗ್ ರು ಕೂದ್ಲಿಗೆ ನೀನೀಗ ಹೋದರೆ
ನಾನಂತು ಈ ಮೋಟ್ ಜಡೆಯ ಕಾಡುವೆ
ಮಿಂಚೆಂಬ ಬಳ್ಳಿಗೆ ಮೇಘದ ಆಸರೆ
ಈ ಹೇನ ಬಾಳಿಗೆ ಈ ತಲೆಯ ಆಸರೆ
ಕೇಶಗಳು ಜಾರಿ ಉದುರಿದರೇನು
ನಾನು ನೀನು ನಮ್ ಪುಟ್ಫುಟ್ ಹೇನು
ಈ ತಲೆಯ ಸೇರಿದ್ಮೇಲೆ ಬೇರೆ ಏನಿದೆ


ತಲೆಯನ್ನು ಕಚ್ಚದೇ ಹಗಲೆಂದು ಆಗದೂ
ನೆತ್ತರ ಕುಡಿಯದೇ ಈ ಪ್ರಾಣ ನಿಲ್ಲದು
ತಲೆ -ತಲೆಯ ಹಾರದ ಹೇನೆಲ್ಲಿ ಕಾಣುವೇ
ಬುರಡೆಯನ್ನು ಕಚ್ಚದೇ ನಾ ಹೇಗೆ ಬಾಳುವೇ
ಬಾಚಣಿಗೆ ನೋವ ಮರೆಯಲಿ ಜೀವ
ದುಂಬಿ ಹೂವ ಕಚ್ಚುವಂತೆ
ಪ್ರೇಮದಿಂದ ನಿನ್ನ ಕಚ್ಚುವೇ

1 comment:

ಬಾನಾಡಿ said...

ಕಾನ್ಸೆಪ್ಟ್ ಚೆನ್ನಾಗಿದೆ. ಕೂದಲು ಉದುರುವ ತನಕ ಬರೆಯುತ್ತಿರುವಿರಾ ಅಥವಾ ನರೆಯುತ್ತಿರುವ ತನಕವಾ..?
ಶುಭವಾಗಲಿ. ಬರಹದಲ್ಲಿ ಕೂದಲಿರಲಿ.