Friday, June 13, 2008

ತಲೆ ಹೊಟ್ಟು:ಪಶ್ಚಿಮದವರ ಉಪಾಯಗಳು

ತಲೆ ಹೊಟ್ಟು ನಿವಾರಣೆಗೆ ನಾವುಗಳೇನೋ ಮೊಸರು ,ನಿಂಬೆ ರಸ,ನಾರು ಬೇರು ಅಂತೆಲ್ಲಾ ಹಚ್ಚಿಕೊಂಡು ಬಿಡುತ್ತೇವೆ ಈ ಪಶ್ಚಿಮದವರೇನು ಮಾಡುತ್ತಾರೆ ಅಂತ ಕೆದಕಿದಾಗ ಕೆಲವು ಇಂಟರೆಸ್ಟಿಂಗ್ ಉಪಾಯಗಳು ದೊರಕಿದವು
ಅವುಗಳು ಹೀಗೆ...

1.ಅರ್ಧ ಕಪ್ ಲಿಸ್ಟರಿನ್ ಮೌತ್ ವಾಶ್ (Listerine mouthwash) ಒಂದು ಮಗ್ ನೀರಿನಲ್ಲಿ ಹಾಕಿ ಅದರಿಂದ ತಲೆ ತೊಳೆಯುವುದು

2.ಬೇಕಿಂಗ್ ಸೋಡ ಪುಡೀಯನ್ನು ಬೆಚ್ಚಗಿನ ನೀರಿನಲ್ಲಿ ಬೆರೆಸಿ ತಲೆ ಗಲಬರಿಸುವುದು

3.ಬೇಬಿ ಆಯಿಲ್ ತಲೆಗೆ ಹಚ್ಚುವುದು

4.ರಬ್ಬಿಂಗ್ ಅಲ್ಕೋಹಾಲ್ ಅನ್ನು (rubbing alcohol) ಹತ್ತಿಯಿಂದ ತಲೆ ಬುರುಡೆಗೆ ಹಚ್ಚುವುದು

5.ಮೂರು ಟೀಸ್ಪೂನ್ ವಿನೆಗರ್ ಅನ್ನು ಒಂದು ಮಗ್ ನೀರಿನಲ್ಲಿ ಬೆರೆಸಿ ತಲೆ ತೊಳೆಯುವುದು

ನೀವು ಟ್ರೈ ನೋಡುವಿರಾದರೆ ಈ ಉಪಾಯಗಳು ಎಷ್ಟು ಪರಿಣಾಮಕಾರಿ ಅಂತ ನನಗೂ ತಿಳಿಸಿ

2 comments:

ಸುಪ್ತದೀಪ್ತಿ suptadeepti said...

ಅಯ್ಯಪ್ಪಾ, ಭಯವಾಗುತ್ತಪ್ಪ ಟ್ರೈ ಮಾಡ್ಲಿಕ್ಕೆ... ಇದ್ದ ನಾಲ್ಕೆಳೆಯೂ ಬಿದ್ದು ಹೋದ್ರೆ?

ಕುಕೂಊ.. said...

ಗಿಡ ಮರ ಬಳ್ಳಿಗಳೇ ಇಲ್ಲದ ಮಂಜುಗಡ್ಡೆಯ ದೇಶಗಳಲ್ಲಿ ಇಂತಹ ಲವಣಗಳನ್ನು ಉಪಯೋಗಿಸದೇ ಇನ್ನೇನು ಮಾಡ್ಯಾರು?